Friday, July 14, 2017

ಬದುಕಲ್ಲಿ ಏನಾಗ ಬಂದೆ!!?

ಕಣ್ಣಿಗೆ ಕಾಣಲಿಲ್ಲ.. ಕನಸಲ್ಲಿ ಬಂದೆ.. ಮಾತಿಗೆ ಸಿಗಲಿಲ್ಲ.. ಮನಸಲ್ಲೇ ನಿಂತೆ..ಕಪ್ಪು-ಬಿಳುಪು ಹಾದಿಯಲ್ಲಿ ರಂಗಿನ ಕಿರಣವ ಸುರಿದೆ..ಬರಿದಾದ ಬದುಕಲ್ಲಿ ಏನಾಗ ಬಂದೆ!!?

ನೋಡಬೇಕೆಂದಾಗ ಕಾಣ ಸಿಗಲಿಲ್ಲ....

ನೋಡಬೇಕೆಂದಾಗ ಕಾಣ ಸಿಗಲಿಲ್ಲ? ಸಿಕ್ಕಾಗ ನೋಡಲು  ಮನಸಾಗಲಿಲ್ಲ! ಮನಸ್ಸಿನಲ್ಲಿ ಮಿಡಿದೆ.. ಕನಸಿನಲ್ಲಿ ಕುಣಿದೆ...ನೀನೊಂದು ಮಾಯೆಯಾದೆ ನನ್ನೊಳಗೆ...!!!???

ನಿರ್ಮಲ ಸ್ನೇಹ..

ನಿರ್ಮಲ ಸ್ನೇಹವೆಂಬುದು ಬಾಡದ ಹೂವು... 
ಈ ಹೂವನ್ನೇ ನಂಬಿ ಬದುಕುತಿವೆ ಕೋಟ್ಯಾಂತರ ಮನವು....
ಯುಗ ಯುಗಗಳೇ ಕಳೆದರು ಸ್ನೇಹಕ್ಕಿಲ್ಲ ಸಾವು....
ಬೇರೆಯಾಗಲು  ಸಾಧ್ಯವೇ ನಾವು -- ನೀವು .....!!???

ನೀನೀಗ ಸಮ್ಮತಿ ನೀಡು.

ಈ ನಿನ್ನ ಕಾಲ್ಗೆಜ್ಜೆ ಇಂದ ಕೇಳಿ ಬಂತು ಇಂಪಾದ ಹಾಡು.ನಿನ್ನಿಂದೆ ಸುತ್ತಿ  ನಾ ಬಂದೆ ನೋಡು.ಇಬ್ಬರು ಕೂಡಿ ಕಟ್ಟೋಣ ಪುಟ್ಟದೊಂದು ಗೂಡು.ಇದಕ್ಕೆಲ್ಲ ನೀನೀಗ ಸಮ್ಮತಿ ನೀಡು..

ಒಂಟಿತನ..

ಒಂಟಿತನ ಹೆಚ್ಚಾಗಿ ತಿಳಿಸಲಾಗದಂತ ಕಸಿ ವಿಸಿ ಮನದಲ್ಲಿ**😶
ನಾ ಯಾರು ಎಂಬ ಪ್ರಶ್ನೆಗೆ ಉತ್ತರ ಉಳಿದಿಲ್ಲ ನನ್ನಲ್ಲಿ??😴
ಕಣ್ಣ ಮುಚ್ಚೆ ಆಟ ಆಡುತಿವೆ ಹಲವಾರು ಸಂಗತಿಗಳು ಬದುಕಲ್ಲಿ....😵
ಸಾಗುತಿದೆ ಜೀವನ ಇಷ್ಟವಿರದ ದಾರಿಯಲ್ಲಿ...😞
ಬಲ್ಲವರಾರು ಅಡಗಿರುವ ಮರ್ಮ ಈ ಬಾಳ ಸೂತ್ರದಲ್ಲಿ....🗾
ವಿಶೇಷ ಏನೆಂದು ತಿಳಿಯುತ್ತಿಲ್ಲ ಭಗವಂತ ನೀಡಿರುವ ಈ ಪಾತ್ರದಲ್ಲಿ....🌗

ಪ್ರೀತಿಯ ಅರ್ಥ..

ಸಂಗಾತಿ ನೀ ಇರಲು ಜೊತೆಯಲ್ಲಿ....
ತಿಳಿದೆನು ಪ್ರೀತಿಯ ಅರ್ಥ ಬದುಕಲ್ಲಿ...
ನಿನಗಿಂತ ಹೆಚ್ಚು ಬೇಕಿಲ್ಲ ನನಗಿಲ್ಲಿ...
ಬೆರೆತಿರುವೆ ನೀನೀಗ ಈ ನನ್ನ ಉಸಿರಲ್ಲಿ...
ನಿಜವೊಂದು ಹೇಳುವೆ ಈ ಕಣ್ಣ ಸನ್ನೆಯಲ್ಲಿ...
ಮರೆಯಬಲ್ಲೆ ಜಗವನ್ನೇ ನಾ ನಿನ್ನ ಮಡಿಲಲ್ಲಿ...

ಸುಂದರ ರಾತ್ರಿಯಲ್ಲಿ...

ಈ ಸುಂದರ ರಾತ್ರಿಯಲ್ಲಿ ನನ್ನ ನಿದ್ದೆಯ ಕದ್ದೆ...
ನಿನದೆ ಚಿಂತೆಯಲ್ಲಿ ಜಾಗರಣೆ ಮಾಡುವಂತೆ ಮಾಡಿದೆ...
ಪ್ರತಿ ಕ್ಷಣವೂ ನಿನ್ನ ಕಡೆ ಗಮನ ಹರಿಸುವಂತೆ ಸೆಳೆದೆ...
ಓ ಸೊಳ್ಳೆಯೇ ನೀ ಹೀಗೇಕೆ ಕಚ್ಚುತಿರುವೆ...