Friday, July 14, 2017

ಬದುಕಲ್ಲಿ ಏನಾಗ ಬಂದೆ!!?

ಕಣ್ಣಿಗೆ ಕಾಣಲಿಲ್ಲ.. ಕನಸಲ್ಲಿ ಬಂದೆ.. ಮಾತಿಗೆ ಸಿಗಲಿಲ್ಲ.. ಮನಸಲ್ಲೇ ನಿಂತೆ..ಕಪ್ಪು-ಬಿಳುಪು ಹಾದಿಯಲ್ಲಿ ರಂಗಿನ ಕಿರಣವ ಸುರಿದೆ..ಬರಿದಾದ ಬದುಕಲ್ಲಿ ಏನಾಗ ಬಂದೆ!!?

ನೋಡಬೇಕೆಂದಾಗ ಕಾಣ ಸಿಗಲಿಲ್ಲ....

ನೋಡಬೇಕೆಂದಾಗ ಕಾಣ ಸಿಗಲಿಲ್ಲ? ಸಿಕ್ಕಾಗ ನೋಡಲು  ಮನಸಾಗಲಿಲ್ಲ! ಮನಸ್ಸಿನಲ್ಲಿ ಮಿಡಿದೆ.. ಕನಸಿನಲ್ಲಿ ಕುಣಿದೆ...ನೀನೊಂದು ಮಾಯೆಯಾದೆ ನನ್ನೊಳಗೆ...!!!???

ನಿರ್ಮಲ ಸ್ನೇಹ..

ನಿರ್ಮಲ ಸ್ನೇಹವೆಂಬುದು ಬಾಡದ ಹೂವು... 
ಈ ಹೂವನ್ನೇ ನಂಬಿ ಬದುಕುತಿವೆ ಕೋಟ್ಯಾಂತರ ಮನವು....
ಯುಗ ಯುಗಗಳೇ ಕಳೆದರು ಸ್ನೇಹಕ್ಕಿಲ್ಲ ಸಾವು....
ಬೇರೆಯಾಗಲು  ಸಾಧ್ಯವೇ ನಾವು -- ನೀವು .....!!???

ನೀನೀಗ ಸಮ್ಮತಿ ನೀಡು.

ಈ ನಿನ್ನ ಕಾಲ್ಗೆಜ್ಜೆ ಇಂದ ಕೇಳಿ ಬಂತು ಇಂಪಾದ ಹಾಡು.ನಿನ್ನಿಂದೆ ಸುತ್ತಿ  ನಾ ಬಂದೆ ನೋಡು.ಇಬ್ಬರು ಕೂಡಿ ಕಟ್ಟೋಣ ಪುಟ್ಟದೊಂದು ಗೂಡು.ಇದಕ್ಕೆಲ್ಲ ನೀನೀಗ ಸಮ್ಮತಿ ನೀಡು..

ಒಂಟಿತನ..

ಒಂಟಿತನ ಹೆಚ್ಚಾಗಿ ತಿಳಿಸಲಾಗದಂತ ಕಸಿ ವಿಸಿ ಮನದಲ್ಲಿ**😶
ನಾ ಯಾರು ಎಂಬ ಪ್ರಶ್ನೆಗೆ ಉತ್ತರ ಉಳಿದಿಲ್ಲ ನನ್ನಲ್ಲಿ??😴
ಕಣ್ಣ ಮುಚ್ಚೆ ಆಟ ಆಡುತಿವೆ ಹಲವಾರು ಸಂಗತಿಗಳು ಬದುಕಲ್ಲಿ....😵
ಸಾಗುತಿದೆ ಜೀವನ ಇಷ್ಟವಿರದ ದಾರಿಯಲ್ಲಿ...😞
ಬಲ್ಲವರಾರು ಅಡಗಿರುವ ಮರ್ಮ ಈ ಬಾಳ ಸೂತ್ರದಲ್ಲಿ....🗾
ವಿಶೇಷ ಏನೆಂದು ತಿಳಿಯುತ್ತಿಲ್ಲ ಭಗವಂತ ನೀಡಿರುವ ಈ ಪಾತ್ರದಲ್ಲಿ....🌗

ಪ್ರೀತಿಯ ಅರ್ಥ..

ಸಂಗಾತಿ ನೀ ಇರಲು ಜೊತೆಯಲ್ಲಿ....
ತಿಳಿದೆನು ಪ್ರೀತಿಯ ಅರ್ಥ ಬದುಕಲ್ಲಿ...
ನಿನಗಿಂತ ಹೆಚ್ಚು ಬೇಕಿಲ್ಲ ನನಗಿಲ್ಲಿ...
ಬೆರೆತಿರುವೆ ನೀನೀಗ ಈ ನನ್ನ ಉಸಿರಲ್ಲಿ...
ನಿಜವೊಂದು ಹೇಳುವೆ ಈ ಕಣ್ಣ ಸನ್ನೆಯಲ್ಲಿ...
ಮರೆಯಬಲ್ಲೆ ಜಗವನ್ನೇ ನಾ ನಿನ್ನ ಮಡಿಲಲ್ಲಿ...

ಸುಂದರ ರಾತ್ರಿಯಲ್ಲಿ...

ಈ ಸುಂದರ ರಾತ್ರಿಯಲ್ಲಿ ನನ್ನ ನಿದ್ದೆಯ ಕದ್ದೆ...
ನಿನದೆ ಚಿಂತೆಯಲ್ಲಿ ಜಾಗರಣೆ ಮಾಡುವಂತೆ ಮಾಡಿದೆ...
ಪ್ರತಿ ಕ್ಷಣವೂ ನಿನ್ನ ಕಡೆ ಗಮನ ಹರಿಸುವಂತೆ ಸೆಳೆದೆ...
ಓ ಸೊಳ್ಳೆಯೇ ನೀ ಹೀಗೇಕೆ ಕಚ್ಚುತಿರುವೆ...

I Need U

ಕಣ್ಣಲ್ಲೇ ಬಿಟ್ಟೆ ಹೃದಯಕ್ಕೆ ಬಾಣ..ಸಿಹಿಯಾದ ನೋವ ಅನುಭವಿಸಿದೆ ಪ್ರಾಣ..ಈ ಕಣ್ಣಿಗೆ  ನೀಡುವೆ ಕಾವಲು ನಾನು..ಸುಮ್ಮನೆ  ನೀಡು ಅನುಮತಿ ನೀನು.. u r mine forever..

ಏಕಾಂಗಿಯಾಗಿ ನನ್ನ ಜೀವನ

ಏಕಾಂಗಿಯಾಗಿ ಸಾಗುತ್ತಿತ್ತು ಈ ನನ್ನ ಜೀವನ...
ಅದರ ಶಾಂತಿಯನ್ನು ಕದಡಿತು ಆ ನಿನ್ನ ನಯನ..
ನಿನ್ನನ್ನು ಭೂಮಿಗೆ ತಂದ ನಿನ್ನ ತಂದೆ-ತಾಯಿಗೆ ಕೋಟಿ, ಕೋಟಿ ನಮನ....
ಕಣ್ಣಿನಿಂದ ಹುಟ್ಟಿದ ಪ್ರೀತಿ ಮನಸ್ಸು ತಲುಪಲು ಕ್ಷಣ ಮಾತ್ರ ಸಾಕು...
ಮನಸ್ಸಿಗೆ ತಲುಪಿದ ಪ್ರೀತಿ ಮರೆಯಲು ಯುಗ-ಯುಗಗಳೇ ಬೇಕು...
ಯುಗದಾಚೆಗೂ ಮೀರಿದ ಪ್ರೀತಿ ನಿನಗಾಗಿ ಮುಡಿಪಿಡುವೆ ಓ ಮನವೇ..
ನಿನ್ನಿಂದ ನನಗೂನು ಪ್ರೀತಿ ಶುರುವಾಗಿದೆ ಇದು ನಿಜವೇ!!!

ಬಾ ಗೆಳತಿ ನನ್ನ ಹೃದಯದ ಅರಮನೆಗೆ...

ನಾನಿಂದು ಕಂಡೆ ಜಗತ್ತಿನ ಎಂಟನೇ ಅದ್ಭುತ... ಅದು ಅಡಗಿರುವುದು ಈ ನಿನ್ನ ಕಣ್ಣ ಕಾಜಲ್ ಸುತ್ತ..
ಮೊದಲ ಬಾರಿಗೆ ಹೃದಯದಲ್ಲಿ ಮೂಡಿತೊಂದು  ಸ್ವಾರ್ಥ...
ಅದರ ಉದ್ದೇಶವಾಗಿತ್ತು ನೀನಾಗಬೇಕು ನನ್ನ ಸ್ವಂತ...
ನಿಸರ್ಗ ಹೇಳುತ್ತಿದೆ ನೀ ನನಗಾಗೆ ಬಂದೆ ಈ ಧರೆಗೆ..
ದಯಮಾಡಿ ಕೇಳುವೆ ಕನಸಲ್ಲೂ ಸರಿಯದಿರು ನೀ ನನ್ನ ಕಣ್ಣ ಮರೆಗೆ...
ನಿಸ್ಸಂದೇಹವಾಗಿ ಬಾ ಗೆಳತಿ ನನ್ನ ಹೃದಯದ ಅರಮನೆಗೆ...  
ಜೋಪಾನ ಮಾಡುವೆನು ಸೂರ್ಯ, ಚಂದ್ರರು ಇರೊವರೆಗೆ....

ಗೆಳೆತನ

ಬಯಸಿದಾಗಲೆಲ್ಲ  ಸಿಗಲು ಮಾರಾಟದ ವಸ್ತುವಲ್ಲ ಗೆಳೆತನ...
ಸಿಕ್ಕಾಗ ಅದರ ಬೆಲೆ ತಿಳಿಯದೆ ಕಳೆದುಕೊಳ್ಳುವುದು ಮೂರ್ಖತನ...

ವರ್ಷಕ್ಕೆ ಒಮ್ಮೆ ಮಾತ್ರ ಬರುವುದು ಜನುಮದಿನ..
ಆದರೆ...
ಗೆಳೆಯರ ಜೊತೆ ಇದ್ದಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಹರ್ಷದಾಯಕ ದಿನ..

ಅಮ್ಮನ ಕೈ ತುತ್ತು ಮರೆಯಲಾಗದ ನಮಗೆ... 
ಗೆಳೆಯರ ಸಿಹಿ ಮಾತು ಮರೆಯಲು ಸಾಧ್ಯವೇ???

ಪ್ರತಿಯೊಬ್ಬ ದುಷ್ಟನಲ್ಲೂ ಒಬ್ಬ ಒಳ್ಳೆಯವನಿರುತ್ತಾನೆ.. ಹಾಗೇ, ಪ್ರತಿಯೊಬ್ಬ ಒಳ್ಳೆಯವನಲ್ಲೂ ಒಬ್ಬ ದುಷ್ಟನಿರುತ್ತಾನೆ...
ಆದರೆ....
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬನೇ ಸ್ನೇಹಿತನಿರಲು ಸಾಧ್ಯವೇ??

ಸ್ನೇಹವೆಂಬುದು ಬದುಕಿನ ಪಯಣದಲಿ ವಿಶೇಷ ರಹದಾರಿ ಅದರಲ್ಲಿ ----
ಕೆಲ ಸ್ನೇಹಿತರು ಬಂದು ಹೋಗುತ್ತಾರೆ,,, 
ಇನ್ನು ಕೆಲವರು ಕೆಲ ಕಾಲ ಜೊತೆಯಾಗಿ ಸಾಗುತ್ತಾರೆ..,, 
ಆದರೆ ಕೆಲವೇ ಕೆಲವರು ಮಾತ್ರ ಎಷ್ಟೇ ದೂರ ಕ್ರಮಿಸಿದರು ಕೂಡ ಜೀವನದುದ್ದಕ್ಕೂ  ನಮ್ಮೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಾರೆ...


ಜಾತಿ, ಭಾಷೆ, ಧರ್ಮ ಇವೆಲ್ಲವನ್ನೂ ಮೀರಿದ ಶ್ರೇಷ್ಠ  ಬಾಂಧವ್ಯವೇ ಗೆಳೆತನ...
ಗೆಳೆತನದ ಒಂದೊಂದು ಮಜಲುಗಳೇ ಬೆಲೆ ಕಟ್ಟಲಾಗದ ಸ್ನೇಹಿತರು.....
                                           --- ಚಂದ್ರು

ಏಕಾಂತದಲಿ

ತಿಳಿ ಸಂಜೆಯ ಏಕಾಂತದಲಿ ನಾನಾಗಿರುವೆ ಮೌನಿ ನಿನ ನೆನೆದು..😯
ನಾ ಸಾಮಾನ್ಯ ಪ್ರೇಮಿ ತಿಳಿಸಲು ಸಾಧ್ಯವಿಲ್ಲ  ನನ್ನ ಪ್ರೀತಿಯ, ಹೃದಯ ಬಗೆದು..😍
ಹಿತವಾದ ಗಾಳಿ, ತಂಪಾದ ಮೋಡ ಕೇಳುತ್ತಿವೆ@ ಗೆಳೆಯ ಏನಿದು ನಿನ್ನ ಚಡಪಡಿಕೆ..??😴
ಅವರಿಗೆ ತಿಳಿದಿಲ್ಲ ನೀ ದೂರಾದ ಕ್ಷಣ ಉಸಿರಿಲ್ಲ ಈ ಜೀವಕೆ..